ಸುಮಾರು ೧೦೦ ವರ್ಷಗಳಿಗೂ ಹಿಂದೆ ಇಲ್ಲಿ ಬೆರಳೆಣಿಕೆಯಷ್ಟೇ ರೈತ ಕುಟುಂಬಗಳಿದ್ದವು. ತಮಗಿದ್ದ ಅಲ್ಪಸ್ವಲ್ಪ ಜಮೀನು ಹಾಗು ಉತ್ಪಾದನೆಯಲ್ಲಿ ಸಂಕಷ್ಟದ ಜೀವನ ನೆಡೆಸುತ್ತಿದ ಇವರು ಪ್ರತಿ ವರ್ಷವೂ ಶ್ರಾವಣ ಮಾಸದ ಸಂದರ್ಭದಲ್ಲಿ ಈ ಊರಿನ ಭಕ್ತರು ಶ್ರೀಕ್ಷೇತ್ರ ಮೃಗವಧೆಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ದರ್ಶನಗೈದು ಬರುತ್ತಿದ್ದರು. ನಂತರ ಊರಿನವರೆಲ್ಲಾ ಸೇರಿ ದೇವರಿಗೆ ಸಿಹಿಎಡೆ ಮಾಡಿ ಶ್ರಾವಣ ಆಚರಿಸಿಕೊಂಡು ಬರುತ್ತಿದ್ದರು. ಒಂದೊಮ್ಮೆ ಶ್ರಾವಣ ಮಾಸದಲ್ಲಿ ಎಂದಿನಂತೆ ಮೃಗವಧೆಗೆ ಇಲ್ಲಿನ ಭಕ್ತರು ಪಾದಯಾತ್ರೆ ಕೈಗೊಂಡು ಪಾದಯಾತ್ರೆಯಲ್ಲೇ ಉಬ್ಬೂರಿಗೆ ವಾಪಾಸಾಗುವಾಗ ಅಲ್ಲಿಂದ ಒಂದು ಶಕ್ತಿ ಇವರನ್ನು ಹಿಂಬಾಲಿಸಿಕೊಂಡು ಬಂತೆಂದೂ ನಂತರ ಉಬ್ಬೂರಿನಲ್ಲಿರುವ ದಟ್ಟ ಕಾನನದಲ್ಲಿ ನೆಲೆನಿಂತ ಈ ಭಕ್ತರನ್ನು ಸಂರಕ್ಷಿಸಿದ ಎನ್ನಲಾಗಿದೆ.
ಈ ಊರಿನ ಕೆಲವಷ್ಟು ದನಕರುಗಳು ರಾತ್ರಿಹೊತ್ತು ಕೊಟ್ಟಿಗೆಗೆ ಬರುತ್ತಿರಲಿಲ್ಲ. ದನ ಮೇಯಿಸುವವನನ್ನು ಊರವರು ಪ್ರಶ್ನಿಸಿದಾಗ ಆತ ಕಾಡಲ್ಲಿ ಹುಡುಕಿದಾಗ ಕೊಟ್ಟಿಗೆಗೆ ಬಾರದೇ ಇರುವ ಹಸುಗಳು ಈ ತಪ್ಪಲಿನಲ್ಲಿ ಹುಲಿಯೊಂದಿಗೆ ಮಲಗಿರುವುದು ಕಂಡು ಚಕಿತನಾಗಿ ಊರಿನವರಿಗೆ ಈ ವಿಷಯ ತಿಳಿಸಿದನು.ಊರವರೆಲ್ಲ ಬಂದು ನೋಡಿದಾಗ ದನಕರುಗಳುಹುಲಿಯೊಂದಿಗೆ ಆಟವಾಡುತ್ತಿರುವುದು
ವಿಧಿವಿಧಾನಗಳೊಂದಿಗೆ ಪೂಜೆ ಪುನಸ್ಕಾರಗಳನ್ನು ನೆಡೆಸಿಕೊಂಡು ಬರುತ್ತಿದ್ದರು. ಆದರೆ ಈಗ ಕೆಲವೇ ವರ್ಷಗಳ ಈಚೆಗೆ ಶಿಥಿಲಾವಸ್ಥೆಗೆ ತಲುಪಿದ ಹಂಚಿನ ಮಾಡಿನ ದೇವಾಲಯವನ್ನು ತೆರವುಗೊಳಿಸಿ
ನೂತನ ದೇವಸ್ಥಾನದ ನಿರ್ಮಾಣಕ್ಕೆ ಊರವರು ಮುಂದಾದಾಗ ಅನೇಕ ಅಡ್ಡಿ ಆತಂಕಗಳು ಎದುರಾದವು. ಸುಮಾರು ಐದಾರು ವರ್ಷಗಳ ಕಾಲ ದೇವಸ್ಥಾನದ ಜೀರ್ಣೋದ್ದಾರ ಬಗ್ಗೆ ಯಾರೂ ಆಸಕ್ತಿ ತೋರಲಿಲ್ಲ. ಊರಿನಲ್ಲಿ ವೈಮನಸ್ಸು, ರೋಗರುಜಿನ, ದನಕರುಗಳಿಗೆ ಕಾಯಿಲೆ, ಫಸಲಿಗೆ ಪ್ರಾಣಿಗಳಿಂಗ ಹಾನಿ, ಕೀಟಬಾಧೆಯಿಂದ ಜನ ಕಂಗಾಲಾಗಿಹೋದರು.ಈ ಎಲ್ಲಾ ಅವಘಡ, ಆತಂಕ ಅನುಭವಿಸಿದ ಉಬ್ಬೂರಿನ ಗ್ರಾಮಸ್ಥರು ಒಂದೆಡೆ ಸೇರಿ ಒಮ್ಮತದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಹೆಗ್ಗಡೆಯವರನ್ನು ಭೇಟಿಯಾಗಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇಬೇಕೆಂಬ ನಿರ್ಧಾರಕ್ಕೆ ಬಂದರು. ಶ್ರೀ ಹೆಗ್ಗಡೆಯವರ ಸಲಹೆಯಂತೆ ಬಾರ್ಕೂರು ಶ್ರೀ ಹೃಷಿಕೇಶ ಬಾಯರ್ ರೊಂದಿಗೆ ಚರ್ಚಿಸಿ ಅವರ ಮಾರ್ಗದರ್ಶನದಂತೆ ಪಂಜೆ ಭಾಸ್ಕರ ಭಟ್ಟರಲ್ಲಿ ಆರೂಢ ಪ್ರಶ್ನೆ ಕೇಳಲಾಗಿ ಅವರು ಸೂಚಿಸಿದಂತೆ ಕ್ಷೇತ್ರದ ಮಹಿಮೆ, ಹಿನ್ನೆಲೆ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ಆಗಬೇಕಾದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲಾಗಿದೆ.
ಈ ಎಲ್ಲಾ ಕಾರ್ಯಗಳನ್ನು ಪೂರೈಸಿದ ನಂತರ ಇಡೀ ಊರಿನಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣಗೊಂಡಿದೆ. ಗ್ರಾಮಸ್ಥರು ಅತ್ಯುತ್ಸಾಹದಿಂದ ದೇವಸ್ಥಾನ ಜೀರ್ಣೋದ್ಧಾರ ಕೈಂಕರ್ಯಕ್ಕೆ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಬಂಧಪಟ್ಟಂತೆ ಸಮರ್ಥ ಸಮಿತಿಯೊಂದು ರಚನೆಗೊಂಡಿದೆ.