ಸಮಿತಿಯ ಉದ್ದೇಶಗಳು :

ಈ ಸಮಿತಿಯು ಕೇವಲ ದೇವಸ್ಥಾನದ ಜೀರ್ಣೋಧಾರಕ್ಕೆ ಮಾತ್ರ ಸೀಮಿತವಾಗದೇ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಲು ಒಂದು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.
1. ಉಬ್ಬೂರು ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವ ದೃಷ್ಟಿಯಿಂದ ಉಚಿತವಾಗಿ ಪಠ್ಯ ಪುಸ್ತಕ ಸಾಮಾಗ್ರಿಗಳನ್ನು ನೀಡುವುದು.
2. ದೇವಸ್ಥಾನದ ಆವರಣದಲ್ಲಿ ಪ್ರಾಣಿ ಪಕ್ಷಿಗಳಿಗೆ ಉಪಯೋಗವಾಗುವ ಹಣ್ಣಿನ ಗಿಡಮರಗಳನ್ನು ಬೆಳೆಸುವುದು ಮತ್ತು ಅವುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವುದು.
3. ಊರಿನ ಸುತ್ತಮುತ್ತಲ ಗ್ರಾಮಸ್ಥರಿಗೆ ಪರಿಸರ ಸ್ವಚ್ಚತೆ, ಅಂತರ್ಜಲದ ಅಗತ್ಯತೆಯ ಬಗ್ಗೆಅರಿವು ಮೂಡಿಸಲು ಕಾರ್ಯಗಾರ ನಡೆಸುವುದು.
4. ಊರಿನ ಪ್ರತಿಯೊಂದು ಕುಟುಂಬದವರೂ ತಮ್ಮ ಮಗುವಿನ ಹೆಸರಲ್ಲಿ 5 ಗಿಡ ಮರಗಳನ್ನು ಬೆಳೆಸುವುದು ಮತ್ತು ಅವರ ಪಾಲನೆಯ ಬಗ್ಗೆ ಜಾಗೃತಿ ಮೂಡಿಸುವುದು.
5. ಊರಿನ ಬಡ ಜನರಿಗಾಗಿ ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ನೆರವಾಗುವುದು ಹಾಗೂ ಆರೋಗ್ಯ ಶಿಬಿರ ನಡೆಸುವುದು.